ಭಾನುವಾರ, ಜನವರಿ 6, 2013

ಓಲವಿನ ಮಲ್ಲಿಕಾ ,

ನಿನಗೆ ಹೆಸರಿತ್ತವರ್ಯಾರು? ಅವರಿಗೆ ನೂರು Thanks. ಎಷ್ಟು ಚೆಂದದ ಹೆಸರು ಮಲ್ಲಿಕಾ. ನಿನ್ನ ಹೆಸರು ನೆನಪಾದಾಗಲೆಲ್ಲ ಅಂಗಳದಿ ಅರಳಿ ನಿಂತಿರೋ ಮಲ್ಲಿಗೆ ನೆನಪಾಗುತ್ತದೆ. ಮಲ್ಲಿಗೆಯ ಘಮ ಘಮ ಸುವಾಸನೆ ಮೂಗಿಗೆ ಬಡಿದಾಗ, ನಿನ್ನ ನೆನಪು ಆ ಮುದ್ದು ಮುಖವು ನೆನಪಾಗುತ್ತೆ. i feel for you. ಸುಮ್ಮನೆ ಕುಳಿತಿರುವವನಿಗೆ ನಿನ್ನ ಕಪ್ಪು ಕೂದಲು ಸೋಕಿದಂತಾಗುತ್ತೆ, ಬರೆಯುವವನ ಬೆರಳ ತುದಿಗೆ ನಿನ್ನ ಯುನಿಫಾರ್ಮನ ಹಸಿರು ಬಣ್ಣದ ವೆಲ್ ತಾಗಿದ ಅನುಭವ, ನಿನ್ನ ಚೆಂದದ ಕಣ್ಣಿಗೊಂದು compliment.
ಹೇಗಿದ್ದಿಯಾ? ತುಂಬಾ ಚೆನ್ನಾಗಿರುವವರನ್ನು ಚೆನ್ನಾಗಿದ್ದೀಯ ಅಂತ ಕೇಳಿ ಅವಮಾನ ಮಾಡಬಾರದಂತೆ. ಆದರೆ ಕೇಳದಿದ್ದರೆ ಈ ಮನಸಿಗೆ ಸಮಾಧಾನವಿಲ್ಲ. ಅಸಲಿಗೆ ನಿನ್ನ ಮೊದಲಸಲ ನೋಡಿದ ದಿನದಿಂದಲೂ ಈ ಮನಸ್ಸಿಗೆ ಸಮಾಧಾನ ಮರೆತು ಹೊಯಿತು ಅದು ಕರಗಿ ಯಾರನ್ನೋ ಹುಡುಕುತ್ತಾ ಹೊರಟು ಹೋಯಿತು ಅಕ್ಷರಸ್: ತುಂಬು ಜಾತ್ರೆಯಲ್ಲಿ ಅಮ್ಮನ ಕೈ ತಪ್ಪಿಸಿ ಕೊಂಡು ಕಂಗಾಲಾಗಿ ಹೋದ ಆ ಮಗುವಿನಂತೆ. ಹುಡುಕಿ ಹುಡುಕಿ ಹೋಗಿ " ಅಮ್ಮ ಅಂತ ಹೇಳಿ" ಒಂದು ಕೈಬೆರಳು ಜಗ್ಗಿದರೆ ಅದು ಅಮ್ಮನದಲ್ಲ ಹಾಗಾದರೆ ಆ ಚಿಗುರು ಬೆರಳು ಯಾರದು? ಮಲ್ಲಿಕಾಳದ್ದ ಗೊತ್ತಿಲ್ಲ.. i felt for you..
ನಾನು ಏನು ಹೇಳಬೇಕೆಂದು ಬರೆಯಲು ಕುಳಿತೆನೋ ಅದು ಹೇಳಲಾಗುತ್ತಿಲ್ಲ. ಆದರು ನನ್ನ ಬದುಕಿನೊಳಗೆ ನೀನು ಯಾವ ಮಾಯೆಯೊಳಗೆ ಬಂದೆಯೋ ಗೊತ್ತಿಲ್ಲ . ನಿನ್ನ ಬಸ್ ಸ್ಟ್ಯಾಂಡಿ ನಲ್ಲಿ ದೂರದಲ್ಲಿ ನಿಂತು ನೋಡುತ್ತಿದ್ದೆ, ಆದರೆ ಅವತ್ಯಕೋ ನಿನ್ನ ನೋಡುತ್ತಿದ್ದಾಗ ನೀ ಅತ್ತೆ ನೋಡು , ನನಗೆ ಸತ್ತೆ ಹೋಗಬೇಕು ಅನ್ನಿಸಿತು ಆ ದಿನ ನನಗೆ ಬೇಜಾರಾದಸ್ಟೂ ನನ್ನ ೨೩ ವರ್ಷದಲ್ಲಿ ಎಂದು ಆಗಿರಲಿಲ್ಲ.... sorry for that
ನಾನು ಯಾರೆಂದು ನಿನಗೆ ಅಲ್ಪ ಸ್ವಲ್ಪ ಗೊತ್ತಾಗಿರಬೇಕು ಮತ್ತೆ ಹಾಗೆ ದೂರದಿಂದ ನಿನ್ನ ದುರುಗಟ್ಟಿ ನೋಡಿ ನೋಯಿಸುವುದಿಲ್ಲ, ಗಾಭರಿ ಹುಟ್ಟಿಸುವುದಿಲ್ಲ, ಸುಮ್ಮನೆ ಎಲ್ಲಿಂದಲೋ ನೋಡಿ ಸುಮ್ಮನಾಗಿ ಬಿಡುತ್ತೇನೆ.. ದುತ್ತನೆ ಎದುರಿಗೆ ಬಂದು ನಿಲ್ಲುವುದಿಲ್ಲ, ನನ್ನ ಮನಸಿಗೆ ಕಷ್ಟ ಪಟ್ಟಾದರೂ ಸಮಾದಾನ ಹೇಳಿಕೊಳ್ಳುತ್ತೇನೆ . i promise you..
೯೦೧೯೯೬೯೯೯೦ ಇದು ನನ್ನ ಮೊಬೈಲ್ ನಂಬರ್ ಮಿಸ್ ಕಾಲ್ ಬಂದರೆ ನಾನು ಧನ್ಯ. ನಾನು ತಿರುಗಿ ಕಾಲ್ ಮಾಡಿದಾಗ recieve ಮಾಡಿ ನಾನು ಮಲ್ಲಿಕಾ ಎಂದರೆ ಸಾಕು ಮರುದಿನವೇ ನನ್ನ ಮೊಬೈಲ್ ಜೊತೆಗೆ ಸಮಸ್ತ ಬದುಕನ್ನೇ ನಿನ್ನ ಮಡಿಲಿಗೆ ಹಾಕಿ ಸತ್ತು ಹೋಗಿ ಬಿಡುತ್ತೇನೆ ನನಗೆ ಪ್ರೀತಿ ಅರ್ಥವಾಗುವುದಿಲ್ಲ...... ಮಲ್ಲಿಗೆ ತೂಕದ ನಿನಗೆ ಅರ್ಥವಾದರೆ ನಾನು ಜೀವನ ಪೂರ್ತಿ ಋಣಿ . i love you.....
ನಾನು ನಿನ್ನವನಾ ......
ಗೊತ್ತಿಲ್ಲ........
ದೀಪಕ್ ನಾಯ್ಕ ಕ್ಷತ್ರಿಯ

A love story in Rail

"A Love Story in Rail"


ಮೊನ್ನೆ ರೈಲಿನಲ್ಲಿ ಕಂಡೆ ಒಂದು ಹುಡುಗಿಯನ್ನ
ಅವಳ ಅಂದ ಚಂದ ಕೆಡಿಸಿತು ನನ್ನ ಮನಸನ್ನ
ಹತ್ತಿರ ಹೋಗಿ ಮಾತಾಡಿಸಬೇಕು ಅಂದುಕೊಂಡೆ
ಅದಕ್ಕೆ ಅಡ್ಡಿ ಆದರು ಅವಳ ಅಪ್ಪ ಅಮ್ಮ

ಪಕ್ಕದಲ್ಲಿ ಕೂತು ಸವಿದೆ ಅವಳ ರೂಪಕ್
ನನಗನ್ನಿಸಿತು ಅವಲಿರಬೇಕು ಸುರಲೋಕದ ಮೇನಕ
ಕಣ್ಣಿಗೆ ಕಾಡಿಗೆಯ ಒಪ್ಪ ಓರಣ
ಮೂಗುತಿ ಹೆಚ್ಚಿಸಿದೆ ನಾಸಿಕದ ಅಂದನಾ
ಹುಡುಕುತಿದೆ ಮನಸು ಮಾತನಾಡಿಸಲು ಕಾರಣ
ಹೃದಯ ಬಯಸುತ್ತಿತ್ತು ಅವಳ ಸಂಗಾನ

ರೈಲು ಬಂದು ನಿಂತಿತು ಗದುಗಿನಲ್ಲಿ
ನಾ ಕುಳಿತ್ತಿದ್ದೆ ಅವಳ ನೆನೆಯುತಲಿ
ಅವಳು ಬಂದು ಕುಳಿತಳು ಮುಂದುಗಡೆ ಸೀಟಿನಲ್ಲಿ
ಹೃದಯ ಬಡಿಯುತ್ತಿತು ಕಿವಿ ತಮಟೆಯಲಿ
ಅವಳ ಮಂದಹಾಸ ಹೆಚ್ಚಿಸಿತು ನನ್ನ ಉತ್ತ್ಸಾಹವನ್ನು
ನಾ ಆಗಲೇ ಆಕ್ರಮಿಸಿಕೊಂಡಿದ್ದೆ ಅವಳ ಪಕ್ಕವನ್ನು
ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತು ನನಗಿನ್ನೂ
ಆಗ ನನ್ನ ಎಚ್ಚರಿಸಿದ್ದು ಗೂಡ್ಸ್ ರೈಲಿನ ಶಿಲ್ಳೆಯೊಂದು

ಕಣ್ಣು ಬಿಟ್ಟಾಗ ಕಾಣುತ್ತಿತ್ತು ಕೊಪ್ಪಳ್ ಸ್ಟೇಷನ್
ಖಾಲಿಯಾಗಿತ್ತು ಅವಳು ಕುಳಿತ್ತಿದ್ದ ಕೆಬಿನ್ನು
ಹೊರಗೆ ಬಂದು ನೋಡಿದೆ ಕಕ್ಕಾಬಿಕ್ಕಿಯಾಗಿ
ಅವಳು ಹೊರಟಿದ್ದಳು ಅಪ್ಪ ಅಮ್ಮನ ಜೊತೆಯಾಗಿ
ಅಸೆ ಕಂಗಳಿಂದ ನೋಡುತ್ತಾ ನಿಂತೇ ಅವಳ ವಯ್ಯರಾದ್ ನಡಿಗೆ
ಅವಳಗಿದ್ದಳು ನನ್ನ ಪಾಲಿಗೆ ಮರುಬೂಮಿಯ ಮರೀಚಿಕೆ